ಆಗಸ್ಟ್ ೨೫ - ಆಗಸ್ಟ್ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೭ನೇ ದಿನ (ಅಧಿಕ ವರ್ಷದಲ್ಲಿ ೨೩೮ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೮೨೫ - ಯುರುಗ್ವೆ ಬ್ರೆಜಿಲ್ನಿಂದ ಸ್ವಾತಂತ್ರ್ಯ ಘೋಷಿಸಿತು. ೧೮೯೪ - ಶಿಬಸಬುರೊ ಕಿಟಸಾಟೊ ಪ್ಲೇಗ್ನ ಕಾರಣೀಭೂತ ಬ್ಯಾಕ್ಟೀರಿಯವನ್ನು ಪತ್ತೆ ಮಾಡಿದನು. ೨೦೦೩ - ಮುಂಬೈನಲ್ಲಿ ಉಂಟಾದ ಎರಡು ಭಯೋತ್ಪಾದಕ ಬಾಂಬ್ ವಿಸ್ಫೋಟದಲ್ಲಿ ೫೨ ಜನರ ಸಾವು. ೨೦೦೫ - ಅಮೇರಿಕ ದೇಶದ ಅತ್ಯಂತ ಭೀಕರ ಮತ್ತು ಹಾನಿಕಾರಕ ಚಂಡಮಾರುತ ಕಟ್ರೀನ ನ್ಯೂ ಆರ್ಲೀನ್ಸ್ ಮತ್ತು ಲೂಯಿಸಿಯಾನ ರಾಜ್ಯಗಳನ್ನು ಅಪ್ಪಳಿಸಿತು. == ಜನನ == ೧೯೦೦ - ಹಾನ್ಸ್ ಕ್ರೆಬ್ಸ್, ಜರ್ಮನಿಯ ಜೀವರಸಾಯನಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೧೭೭೬ - ಡೇವಿಡ್ ಹ್ಯೂಮ್, ಸ್ಕಾಟ್ಲೆಂಡ್ನ ತತ್ವಶಾಸ್ತ್ರಜ್ಞ. ೧೮೨೨ - ವಿಲಿಯಮ್ ಹೆರ್ಶೆಲ್, ಜರ್ಮನಿ ಮೂಲದ ಖಗೋಳಶಾಸ್ತ್ರ ತಜ್ಞ. ೧೮೬೭ - ಮೈಕಲ್ ಫ್ಯಾರಡೆ, ಇಂಗ್ಲೆಂಡ್ನ ವಿಜ್ಞಾನಿ. ೧೯೦೦ - ಫ್ರೆಡೆರಿಕ್ ನೀಜ್ಶೆ, ಜರ್ಮನಿತ ತತ್ವಶಾಸ್ತ್ರಜ್ಞ. ೧೯೦೮ - ಹೆನ್ರಿ ಬೆಕೆರೆಲ್, ಫ್ರಾನ್ಸ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == ಯುರುಗ್ವೆ - ರಾಷ್ಟ್ರೀಯ ದಿನಾಚರಣೆ. ಫಿಲಿಪ್ಪೀನ್ಸ್ - ರಾಷ್ಟ್ರೀಯ ನಾಯಕರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ